ಕಣ್ಣುಗಳನ್ನು ಮಣ್ಣುಪಾಲು ಮಾಡದೆ, ಇಡೀ ಸಮಾಜಕ್ಕೆ ಮಾದರಿ. ಕಥೋಲಿಕ್ ಸಭಾ ಶಕ್ತಿನಗರ ಘಟಕ, ಸೇವಾ ಪ್ರಕಲ್ಪ ಚಾರಿಟೇಬಲ್ ಟ್ರಸ್ಟ್(ರಿ),ಮಂಗಳೂರು ಮತ್ತು ನೇಜಿಗುರಿ ಗುಂಪು ಇವರ ಜಂಟಿ ಆಶ್ರಯದಲ್ಲಿ ಹಾಗೂ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ನೇತ್ರದಾನ ಜಾಗೃತಿ ಅಭಿಯಾನ ದಿನಾಂಕ 11.04.2021 ರಂದು ಬೆಳಿಗ್ಗೆ 8.30ಗೆ ದೇವಮಾತಾ ದೇವಾಲಯ ಶಕ್ತಿನಗರದಲ್ಲಿ ನೆರವೇರಿತು.
ಈ ನೇತ್ರದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಿಂದ ಪ್ರೇರಿತರಾಗಿ ದಿನಾಂಕ. 01.06.2022 ರಂದು ನಿಧನರಾದ ನೇಜಿಗುರಿಯ ಲಿಲ್ಲಿ ಡಿಸೋಜಾ (88 ವರ್ಷ) ಅವರ ಕಣ್ಣುಗಳನ್ನು ಅವರ ಕುಟುಂಬದವರು KMC ನೇತ್ರಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.