ರಾಜಕೀಯ ಅಧಿಕಾರ ಎಂಬುದು ನೀರಿನ ಮೇಲಿನ ಗುಳ್ಳೆಯಿದ್ದಂತೆ. ತನ್ನ ಸ್ಥಾನಮಾನ ಇದ್ದಂತ ಸಂದರ್ಭದಲ್ಲಿ ಸಮಾಜಕ್ಕೆ ಏನು ಒಳ್ಳೆಯದನ್ನು ನೀಡುತ್ತಾನೋ ಅದು ದೊಡ್ಡ ಶಕ್ತಿಯಾಗಿ ನಮ್ಮನ್ನು ಆವರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಹೇಳಿದರು. ವಿಧಾನ ಪರಿಷತ್ ಸದಸ್ಯರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಐವನ್ ಡಿ'ಸೋಜಾ ಅವರಿಗೆ ಸಂಯುಕ್ತ ಕ್ರೈಸ್ತ ಸಂಘಟನೆ ಬೆಳ್ತಂಗಡಿ ವತಿಯಿಂದ ಆ.11ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರಾದ ಬಿಷಪ್ ಡಾ| ಲಾರೆನ್ಸ್ ಮುಕ್ಕುಯಿ ಮಾತನಾಡಿ, ಸಮಾಜದ ಪ್ರಗತಿಗೆ ಸಮಾಜದ ಎಲ್ಲರ ಕೊಡುಗೆ ಅತ್ಯಮೂಲ್ಯ. ಬದುಕಿನ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಪರಿಶ್ರಮದ ಜತೆಗೆ ಸ್ನೇಹ ಸೌಹಾರ್ದ ಬಾಳ್ವೆ ನಡೆಸಬೇಕು. ನಾವು ಬೆಳೆಯುತ್ತ ಎಲ್ಲರನ್ನು ಬೆಳೆಸುವ ಗುಣ ನಮ್ಮದಾಗಬೇಕು. ಅದೇ ರೀತಿ ನಮ್ಮ ಸಮುದಾಯದ ನಾಯಕ ಇಂದು ಆಯ್ಕೆಯಾಗಿ ಬಂದಿದ್ದು ಹರ್ಷ ತಂದಿದೆ. ಸಮಾಜಕ್ಕೆ ಇನ್ನಷ್ಟು ಕೊಡುಗೆ ಸಿಗಲಿ ಎಂದು ಹಾರೈಸಿದರು.
ದೈನಂದಿನ ಜನಜೀವನದ ಮೇಲೆ ವ್ಯತಿರಿಕ್ತ ಹೊಡತೆವಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯವೂ ಅಪಾಯದಲ್ಲಿದೆ. ದೇಶದಲ್ಲಿ ದ್ವೇಷದ ರಾಜಕರಣದ ಬದಲಾಗಿ ಕಾನೂನುಗಳು ಮಾನವನ ಪ್ರತಿಯೊಂದು ವ್ಯವಸ್ಥೆಗೆ ಹಾಸುಹೊಕ್ಕಾಗಿರಬೇಕು. ಈ ಮೂಲಕ ಸಮರ್ಥ ನಾಯಕ ಆಯ್ಕೆ ಯಾಗಬೇಕು ಎಂದ ಅವರು ಸ್ವಜಾತಿ ಬಾಂಧವರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರಾದ ರೆ! ಬಿಷಪ್ ಡಾ| ಲಾರೆನ್ಸ್ ಮುಕ್ಕುಯಿ ಅವರ 25 ವರ್ಷದ ಸೇವೆಯನ್ನು ಗುರುತಿಸಿ ಬೆಳ್ತಂಗಡಿ ಕೆಥೋಲಿಕ್ ಸಭಾದಿಂದ ಗೌರ ವಿಸಲಾಯಿತು. ಕ.ಸ. ಬೆಳ್ತಂಗಡಿ ವಲಯ ಆಧ್ಯಾತ್ಮಿಕ ನಿರ್ದೇಶಕ ವಿಗಾರ್ ವಾರ್ ರೆ| ಫಾ। ಡಾ। ವಾಲ್ಟರ್ ಡಿಮೆಲ್ಲೊ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ। ಡಾ। ಸ್ಟೇನಿ ಗೋವಿಯಸ್ ಗೌರವ ಉಪಸ್ಥಿತಿ ಇದ್ದು ಸಂದೇಶ ವಾಚಿಸಿದರು.
ರಾಜ್ಯಮಟ್ಟದಲ್ಲಿ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಈಗಿನ ಸವಾಲುಗಳು ಹಾಗೂ ಸಂಘಟನೆಯ ಪ್ರಾಮುಖ್ಯ ಕುರಿತು ನಿವೃತ್ತ ಪ್ರಾಂಶುಪಾಲರಾದ ಆ್ಯಂಟನಿ ಟಿ.ಪಿ. ಹಾಗೂ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಥೊಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷ ಲೀಯೋ ರೋಡ್ರಿಗಸ್ ಸ್ವಾಗತಿಸಿದರು.
ವಿವಿಧ ಸಮಿತಿಗಳ ಬಿಟ್ಟನೆಡುನಿಲಂ, ಪೆ.ಪಿ.ಜೋಸೆಫ್, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಜೆರಾಲ್ಡ್ ಮೋರಾಸ್, ಐರಿನ್ ಸಿಕ್ವೆರಾ, ಪಾಸ್ಟಾರ್ ಅಂತೋನಿ ರೊಡ್ರಿಗಸ್, ರೆಜಿ ಜಾರ್ಜ್, ಗ್ರೇಸಿ ಲೋಬೊ, ಸ.ಸಭಾ ಕಾರ್ಯದರ್ಶಿ ಪಿಲಿಪ್ ಡಿಕುನ್ಹ ವಿನ್ಸೆಂಟ್ ಡಿ'ಸೋಜಾ, ಟೊಮಿ ವೈಪನ, ಐಸಿವೈಎಂ ಅಧ್ಯಕ್ಷ ಸುಪ್ರಿತ್ ಫೆರ್ನಾಂಡಿಸ್, ಸಭಾಸ್ಟಿಯನ್ ಮಲಯಾಟ್ಟಿಲ್, ಮೆರ್ಸಿ ಚಾಕೊ ಕಾಡಕೇರಿಲ್, ಜೈಸನ್ ಪಟ್ಟೆರಿ, ರಾಜಕೀಯ ಸಂಚಾಲಕ ವಿನ್ಸೆಂಟ್ ಡಿ'ಸೋಜಾ ಮತ್ತಿತರರು ಉಪಸಿತರಿದರು.