ಬೆಳ್ತಂಗಡಿ ವಲಯ ಕಾರ್ಯಕಾರಿ ಕುಟುಂಭ ಸಹಮಿಲನ ಮಡಂತ್ಯಾರ್ ಘಟಕದಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಅಧ್ಯಾತ್ಮಿಕ ನಿರ್ದೇಶಕ ಅತೀ ವಂಧನಿಯಾ ಸ್ವಾಮಿ ವಾಲ್ಟರ್ ಡಿಮೇಲ್ಲೋ ಉದ್ಘಾಟಿಸಿ ಸಂದೇಶ ನೀಡಿದರು. ಅದ್ಯಾಕ್ಷ ಲಿಯೋ ರೋಡ್ರಿಗಸ್, ಸಂಪನ್ಮೂಲ ವ್ಯಕ್ತಿ ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷರು ಶ್ರೀಮತಿ ಫ್ಲೇವಿ ಡಿಸೋಜಾ ನಾಯಕತ್ವದ ಬಗ್ಗೆ ಮಾಹಿತಿ ನೀಡಿದರು.
ಮಡಂತ್ಯಾರ್ ಚರ್ಚ್ ನಾ ಪ್ರಧಾನ ಧರ್ಮಗುರುಗಳು ಫಾ. ಸ್ಟೇನಿ ಗೋವಿಯಾಸ್. ಪ್ರಾರ್ಥನಾವಿಧಿ ನೆರವೇರೆಸಿದರು. ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಆಲ್ವಿನ್ ಡಿಸೋಜಾ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ 12 ಘಟಕದ ಅಧ್ಯಕ್ಷರಿಗೆ, ವಲಯದ ಮಾಜಿ ಅಧ್ಯಕ್ಷರಿಗೆ, ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷರಿಗೆ. ಹಾಗೂ ಮಾಜಿ ಪದಾಧಿಕಾರಿಗಳಿಗೆ, ವಲಯದ ಪ್ರಸ್ತುತ ಪದಾಧಿಕಾರಿಗಳಿಗೆ ವಲಯದ ಭಾಷಣ ಸ್ಪರ್ಧೆಯ ಸಂಚಾಲಕರಿಗೆ ಗೌರವಿಸಲಾತು. ವಲಯದ ಪ್ರಸ್ತುತ ಸಹಕಾರಿ ಕ್ರೇತ್ರದ ನಿರ್ದೇಶಕರಾಗಿ ಆಯ್ಕೆಯಾದ ಅಮಿತ ಲೋಬೊ, ಅಧ್ಯಕ್ಷ ಜೋಯಲ್ ಮೆಂಡೋನ್ಸ. ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಲೂಸಿ ಅಲ್ಬುಕರ್ಕ್, ಮೈಕಲ್ ಡಿಸೋಜಾ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ. ಕೃಷಿ ಕ್ರೇತ್ರದಲ್ಲಿ ಸಾಧನೆ ಮಾಡಿದ ಜಾನ್ ಡಿಸೋಜಾರವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೀನಾ ಫೆರ್ನಾಂಡೀಸ್ ಮಡಂತ್ಯಾರು, ವಿಲೊನಾ ದಿಕುನಃ ಉಜೆರೆ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರೀಮಲ್ ನಿಶಾ ರೋಡ್ರಿಗಸ್ ರವರನ್ನು ಸನ್ಮಾನಿಸಲಾಯಿತು. ವಲಯ ಅಧ್ಯಾತ್ಮಿಕ ನಿರ್ದೇಶಕ ಫಾ.ವಾಲ್ಟರ್ ಡಿ ಮೇಲ್ಲೋ ಅವರ 70 ನೇ ಹುಟ್ಟು ಹಬ್ಬ ವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಪ್ರಸ್ತುತ ವಲಯ ಅಧ್ಯಕ್ಷ ಲಿಯೋ ರೋಡ್ರಿಗಸ್ ರವರ 2 ವರ್ಷದ ಸೇವೆಗೆ ಗೌರವಿಸಲಾಯಿತು.
ವಿನ್ಸಿ ಮೋರಸ್ ಕಾರ್ಯಕ್ರಮದ ನಿರೂಪಿಸಿ, ಫಿಲಿಪ್ ಡಿ ಕುನ್ಹಾ ವಂದಿಸಿದರು.
For more photos click here