ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಭಾರತೀಯ್ ಕಥೊಲಿಕ್ ಯುವ ಸಂಚಲನ್ ಮಂಗ್ಳುರ್ ದಿಯೆಸೆಜ್ (ಐ.ಸಿ.ವೈ.ಎಮ್.), ಸಿರೋಮಲಬಾರ್ ಬೆಳ್ತಂಗಡಿ ದಿಯೆಸೆಜ್, ಸಿರೋಮಲಂಕಾರ್ ಪುತ್ತೂರ್ ದಿಯೆಸೆಜ್, ಮಂಗ್ಳುರ್ ದಿಯೆಸೆಜಿಚ್ಯಾ ಕಥೊಲಿಕ್ ಸ್ತ್ರೀಯಾಂಚಿ ಮಂಡಳಿ ಹಾಂಚ್ಯಾ ನೇತ್ರತ್ವಂತ್ ಮಂಗ್ಳುರ್, ಬೆಳ್ತಂಗಡಿ ಆನಿಂ ಪುತ್ತೂರ್ ದಿಯೆಸೆಜಿಚೊ ಕಥೊಲಿಕ್ ಬೃಹತ್ ಸಮಾವೇಶ್ ಮಡಂತ್ಯಾರ್ ಸೇಕ್ರೇಡ್ ಹಾರ್ಟ್ ಇಗರ್ಜಿಚಾ ವಠರಾಂತ್ ತಾ| 02-02-2020ವೆರ್ ಆಯ್ತಾರಾ ದಿಸಾ ಆಯೋಜನ್ ಕೆಲಾ.
ಹ್ಯಾ ಸಮಾವೇಶಾಂತ್ ದಕ್ಷಿಣ ಕನ್ನಡ ಆನಿ ಕಾಸರಗೋಡ್ ಜಿಲ್ಲೆ ಥಾವ್ನ್ ಸುಮಾರ್ 25,000 ಕಥೊಲಿಕಾಂನಿ ಭಾಗ್ ಘೆಂವ್ಚೆಂ ನಿರೀಕ್ಷಾ ಆಸೊನ್ ತಾ| 08-12-2019 ಆಯ್ತಾರಾ ಸಕಾಳಿಂ 10.30 ವರಾರ್ ಮಂಗ್ಳುರ್ ಕೊಡಿಯಾಲ್ ಬೈಲ್ ಬಿಸ್ಪಾಚ್ಯಾ ನಿವಾಸಾಚ್ಯಾ ಸಭಾಂಗಣಾಂತ್ ಹ್ಯಾ ಸಮಾವೇಶಚೆ ಲೋಗೊ ಉದ್ಘಾಟನ್ ಕಾರ್ಯಕ್ರಮ್ ಆಯೋಜನ್ ಕೆಲ್ಲೆ. ಐ.ಸಿ.ವೈ.ಎಮ್. ದಿರೆಕ್ತೊರ್ ಮಾ| ರೊನಾಲ್ಡ್ ಡಿಸೋಜ ಹಾಂಣಿಂ ಹ್ಯಾ ಲೋಗೊಚೆಂ ಉದ್ಘಾಟನ್ ಕೆಲೆಂ. ಕಾರ್ಯಕ್ರಮಚೆ ಉದ್ಘಾಟನ್ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಹಾಚೊ ಕೇಂದ್ರಿಯ್ ಅಧ್ಯಕ್ಷ್ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ ವಹಿಸುನ್ ಜಮ್ಲಲ್ಯಾ ಸರ್ವಾಂಕ್ ಸ್ವಾಗತ್ ಕರ್ನ್ ಪ್ರಾಸ್ತಾವಿಕ್ ಭಾಷಣ ಮುಖಾಂತ್ರ್ ಆಮಿಂ ಕಥೊಲಿಕಾಂನಿ ದಕ್ಷಿಣ ಕನ್ನಡ ಜಿಲ್ಲೆಂತ್ 2,50,000 ಚಾಕೀ ಚಡ್ ಲೋಕ್ ಆಸೊನ್, ವಿದ್ಯಾಕ್ಷೇತ್ರಾಂತ್, ಭಲಾಯ್ಕಿ ಕ್ಷೇತ್ರಾಂತ್ ಸಮಾಜೆಕ್ ಖಂಚೀಯ್ ಜಾತ್-ಧರ್ಮ್ ಭೇದ್-ಭಾವ್ ದಾಕಯ್ನಾಸ್ತಾನಾ ಸೆವಾ ದಿತೇ ಆಸಾಂವ್. ಆಮ್ಚೆ ಯುವಜಣ್ ತಾಂಚೆಂ ಶಿಕಪ್ ಸಂಪೊವ್ನ್ ವøತ್ತೆಕ್ ಭಾಯ್ಲ್ಯಾ ದೇಶಾಕ್ ಆನಿ ಪಯ್ಶಿಲ್ಯಾ ಗಾಂವಾಂಕ್ ವೆಚೆಂ ಸರ್ವೆಸಾಮಾನ್ಯ್ ಜಾಲಾಂ. ಮುಖ್ಲ್ಯಾ ದಿಸಾಂನಿ ಯುವಜಣ್ ಆಪ್ಲ್ಯಾ ಗಾಂವಾರ್‍ತ್ತ್ ಆಸೊನ್ ಸರ್ಕಾರಿ ಸವಲತ್ತ್ಯೊ ಘೆಂವ್ಚ್ಯೊ ಮಾತ್ರ್ ನ್ಹಯ್ ಆಸ್ತಾಂ ಸ್ವಂತ್ ಉದ್ಯೋಗ ಥಂಯ್ ಗಮನ್ ದಿಂವ್ಚ್ಯಾ ವಿಶಿಂ ಆನಿ ಸರ್ಕಾರಿ ಕಾಮಾಂ ಮೆಳ್ಚ್ಯಾ ವಿಶಿಂ ಉತ್ತೇಜನ್ ದೀಂವ್ಕ್ ಹೆಂ ಕಾರ್ಯಕ್ರಮ್ ಆಯೋಜನ್ ಕೆಲಾಂ ಮ್ಹಣ್ ತಿಳ್ಸಿಲೆಂ.
ವೆದಿಚೆರ್ ಕೇದ್ರಿಯ್ ಅಧ್ಯಕ್ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ, ಐ.ಸಿ.ವೈ.ಎಮ್. ದಿರೆಕ್ತೊರ್ ಮಾ| ರೊನಾಲ್ಡ್ ಡಿಸೋಜ, ಕಾರ್ಯಕ್ರಮಚೆ ಸಂಚಾಲಕ್ ಶ್ರೀ ಜೊಯಲ್ ಮೆಂಡೋನ್ಸಾ, ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್, ಐ.ಸಿ.ವೈ.ಎಮ್. ಕೇಂದ್ರಿಯ್ ಅಧ್ಯಕ್ಷ್ ಶ್ರೀ ಲಿಯೋನ್ ಸಲ್ಡಾನ್ಹಾ, ಕಾರ್ಯದರ್ಶಿ ಕುಮಾರಿ ವೀಣಾ ವಾಸ್ ಆನಿ ಸಾಂದೆ, ಕಥೊಲಿಕ್ ಸಭಾ ಮಡಂತ್ಯಾರ್ ಘಟಕಾಚೆ ಕಾರ್ಯದರ್ಶಿ ಶ್ರೀಮತಿ ಆ್ಯಗ್ನೆಸ್ ಪ್ರಮೀಳಾ ಲೋಬೊ, ಶ್ರೀ ಫ್ರಾನ್ಸಿಸ್ ವಿ.ವಿ. ಕಥೊಲಿಕ್ ಸಭೆಚೆ ಸರ್ವ್ ಕೇಂದ್ರಿಯ್ ಮಾಜೀ ಅಧ್ಯಕ್ಷ್, ವಾರಾಡೊ ಅಧ್ಯಕ್ಷ್, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿಚೆ ಸರ್ವ್ ಸಾಂದೆ ಹಾಜರ್ ಆಸ್‍ಲ್ಲೆ. ಕಥೊಲಿಕ್ ಸಭಾ ಕೇಂದ್ರಿಯ್ ಸಹಕಾರ್ಯದರ್ಶಿ ಶ್ರೀ ಅಜಯ್ ಪಾಯ್ಸ್, ಸಹಖಜಾಂಜಿ ಶ್ರಿಮತಿ ಗ್ರೆಟ್ಟಾ ಫೆರ್ನಾಂಡಿಸ್ ಉಪಸ್ಥಿತ್ ಆಸ್‍ಲ್ಲಿಂ. ಮಾ| ರೊನಾಲ್ಡ್ ಡಿಸೋಜ ಹಾಂಣಿಂ ಆಪ್ಲೊ ಸಂದೇಶ್ ದಿಲೊ.
ಕಾರ್ಯಕ್ರಮಾಚ್ಯಾ ಅಖ್ರೇಕ್ ಜಮ್ಲೆಲ್ಯಾ ಸರ್ವಾಂಕ್ ಶ್ರೀ ಅಜಯ್ ಪಾಯ್ಸ್ ಹಾಂಣಿಂ ವಂದಿಲೆಂ.
ಕಥೊಲಿಕ್ ಬೃಹತ್ ಸಮಾವೇಶಾದ ಲೋಗೊ ಬಿಡುಗಡೆ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ), ಭಾರತೀಯ್ ಕಥೊಲಿಕ್ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ (ಐ.ಸಿ.ವೈ.ಎಮ್.), ಸಿರೋಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯ, ಸಿರೋಮಲಂಕರ ಪುತ್ತೂರು ಧರ್ಮಪ್ರಾಂತ್ಯ, ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸ್ತ್ರೀಯರ ಮಂಡಳಿ ಇವರ ನೇತ್ರತ್ವದಲ್ಲಿ ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಧರ್ಮಪ್ರಾಂತ್ಯದ ಕಥೊಲಿಕ್ ಬೃಹತ್ ಸಮಾವೇಶವನ್ನು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಇಗರ್ಜಿಯ ವಠಾರದಲ್ಲಿ ತಾ| 02-02-2020ನೇ ಆದಿತ್ಯವಾರದಂದು ಹಮ್ಮಿಕೊಂಡಿರುತ್ತೇವೆ.
ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಿಂದ ಸುಮಾರು 25,000 ಕಥೋಲಿಕ ಭಾಂದವರು ಭಾಗವಹಿಸುವ ನಿರೀಕ್ಷೆಯಿದ್ದು ತಾ| 8-12-2019ನೇ ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ಕೊಡಿಯಾಲ್‍ಬೈಲ್ ಬಿಷಪ್ ಹೌಸ್‍ನ ಸಭಾಂಗಣದಲ್ಲಿ ಈ ಸಮಾವೇಶದ ಲಾಂಛನದ ಉದ್ಘಾಟನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಲಾಂಛನದ ಉದ್ಘಾಟನೆಯನ್ನು ಐ.ಸಿ.ವೈ.ಎಮ್. ನಿರ್ದೇಶಕರಾದ ವಂ|ರೊನಾಲ್ಡ್ ಡಿಸೋಜ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತರವರು ವಹಿಸಿ ನೆರೆದ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣದ ಮೂಲಕ ನಾವು ಕಥೊಲಿಕ ಭಾಂದವರು ದ.ಕ. ಜಿಲ್ಲೆಯಲ್ಲಿ 2,50,000ಕ್ಕಿಂತ ಮಿಕ್ಕಿದ ಜನರಿದ್ದು, ವಿದ್ಯಾಕ್ಷೇತ್ರದಲ್ಲಿ, ಆರೋಗ್ಯಕ್ಷೇತ್ರದಲ್ಲಿ ಸಮಾಜಕ್ಕೆ ಯಾವುದೇ ಜಾತಿಮತ ಭೇದವಿಲ್ಲದೆ ಸೇವೆಯನ್ನು ಮಾಡುತ್ತಾ ಬಂದಿರುತ್ತೇವೆ. ನಮ್ಮ ಯುವಜನತೆ ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿ ಉದ್ಯೋಗವನ್ನು ಹರಸಿ ಹೊರದೇಶಗಳಿಗೆ ಹಾಗೂ ದೂರದ ಊರುಗಳಿಗೆ ಹೋಗುವುದು ಸರ್ವೆಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಯುವ ಜನತೆಯು ತಮ್ಮ ಊರಲ್ಲೇ ನೆಲೆಸಿ ಸರಕಾರಿ ಸವಲತ್ತುಗಳನ್ನು ಪಡೆಯುವುದಲ್ಲದೇ, ಸ್ವಂತ ಉದ್ಯೋಗದ ಕಡೆ ಗಮನ ನೀಡುವ ಕುರಿತು ಹಾಗೂ ಸರಕಾರಿ ನೌಕರಿಯನ್ನು ಪಡೆಯುವರೇ ಉತ್ತೇಜನ ನೀಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೇಂದ್ರಿಯ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ, ಐ.ಸಿ.ವೈ.ಎಮ್. ನಿರ್ದೇಶಕರಾದ ವಂ| ರೊನಾಲ್ಡ್ ಡಿಸೋಜ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಜೋಯಲ್ ಮೆಂಡೊನ್ಸಾ, ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್, ಐ.ಸಿ.ವೈ.ಎಮ್. ಕೇಂದ್ರಿಯ ಅಧ್ಯಕ್ಷರಾದ ಶ್ರೀ ಲಿಯೋನ್ ಸಲ್ಡಾನ್ಹಾ, ಕಾರ್ಯದರ್ಶಿ ಕುಮಾರಿ ವೀಣಾ ವಾಸ್ ಮತ್ತು ಸದಸ್ಯರು ಹಾಗೂ ಕಥೊಲಿಕ್ ಸಭಾ ಮಡಂತ್ಯಾರು ಘಟಕದ ಕಾರ್ಯದರ್ಶಿ ಶ್ರೀಮತಿ ಆ್ಯಗ್ನೆಸ್ ಪ್ರಮೀಳಾ ಲೋಬೊ, ಶ್ರೀ ಫ್ರಾನ್ಸಿಸ್ ವಿ.ವಿ., ಕಥೊಲಿಕ್ ಸಭೆಯ ಎಲ್ಲಾ ಕೇಂದ್ರಿಯ ಮಾಜೀ ಅಧ್ಯಕ್ಷರುಗಳು ಹಾಗೂ ವಲಯ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರುಗಳು ಹಾಜರಿದ್ದರು. ಕಥೊಲಿಕ್ ಸಭಾ ಕೇಂದ್ರಿಯ ಸಹಕಾರ್ಯದರ್ಶಿ ಶ್ರೀ ಅಜಯ್ ಪಾಯ್ಸ್, ಸಹ ಖಜಾಂಜಿ ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಂ|ರೊನಾಲ್ಡ್ ಡಿಸೋಜ ರವರು ತಮ್ಮ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಕೊನೆಗೆ ನೆರೆದಿರುವ ಎಲ್ಲರಿಗೂ ಶ್ರೀ ಅಜಯ್ ಪಾಯ್ಸ್ ರವರು ವಂದಿಸಿದರು.