ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಶಿಬಿರವನ್ನು ತಾರೀಖು 7/12/2019 ರಂದು ಈ ಮೂರು ಶಾಲೆಗಳಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಲಯನ್ಸ್ ಮತ್ತು ಲೀಯೋ ಕ್ಲಬ್ ಮೂಲ್ಕಿ, ಕಥೊಲಿಕ್ ಸಭಾ ಸುರತ್ಕಲ್ ವಲಯ, ಕಥೊಲಿಕ್ ಸಭಾ ಮೂಲ್ಕಿ ಘಟಕ, ವಿಜಯ ಕಾಲೇಜು, ಮೆಡಲಿನ್ ಫ್ರೌಢಶಾಲೆ ಮತ್ತು ಬೆಥನಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಇವರ ಜಂಟಿ ಸಹಭಾಗಿತ್ವದಲ್ಲಿ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದರು.
ಈ ಮಾಹಿತಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತರವರು ನೆರವೇರಿಸಿ ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷರು ತಮ್ಮ ಅನಿಸಿಕೆಯನ್ನು ನುಡಿದರು. ಲಿಂಕ್ ಲೈನ್- ಡಿ ಅಡಿಕ್ಷನ್ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಲೀಡಿಯಾ ಲೋಬೊ ಹಾಗೂ ಗಣೇಶ್ ನಾಯಕ್ ಮೂಲ್ಕಿ ಇವರು ದøಶ್ಯ ಮಾದ್ಯಮದೊಂದಿಗೆ ಸವಿಸ್ತಾರವಾಗಿ ಇದರ ದುಷ್ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ ರಸ್ಸೆಲ್ ರೋಚ್, ಶ್ರೀಮತಿ ಲಿಡಿಯಾ ಫುರ್ಟಾದೊ, ಶ್ರೀ ವಿನೋದ್ ಸಾಲ್ಯನ್, ಶ್ರೀ ಲಯನ್ ಪ್ರಭೋದ ಕುಡ್ವ, ಶ್ರೀ ಉದಯ ಅಮೀನ್ ಮಟ್ಟು, ಶ್ರೀಮತಿ ಪಮೀದ ಬೇಗಂ, ಸಿಸ್ಟರ್ ನಂದಿತಾ, ಸಿಸ್ಟರ್ ವೀಣಾ ಡಿಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ ಪಿಂಟೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪಮೀದ ಬೇಗಂರವರು ಸ್ವಾಗತಿಸಿದರು, ಸಿಸ್ಟರ್ ವೀಣಾರವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಶ್ರೀ ಮೂಲ್ಕಿ ಗಣೇಶ್ ನಾಯಕ್ ರವರಿಗೆ ಹುಟ್ಟೂರ ಸನ್ಮಾನವನ್ನು ನೀಡಲಾಯಿತು. ಶ್ರೀ ವಿನೋದ್ ಸಾಲ್ಯನ್ ರವರು ಸನ್ಮಾನ ಪತ್ರವನ್ನು ಓದಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರೈಮಂಡ್ ರೆಬೆಲ್ಲೊರವರು ನೆರವೇರಿಸಿದರು. ಶಾಲಾ ಮಕ್ಕಳು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.