May 14, 2017 :
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 39ನೇ ವಾರ್ಷಿಕ ಮಹಾ ಸಭೆಯು ಮಂಗಳೂರು ಧರ್ಮಾಧ್ಯಕ್ಷರ ನಿವಾಸದಲ್ಲಿ ಶ್ರೀ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್ 2016-17ನೇ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದಿಸಿದರು. ಖಜಾಂಚಿ ಕು.ವಿವಿಡ್ ಡಿಸೋಜಾರವರು ಲೆಕ್ಕ ಪತ್ರವನ್ನು ಮಂಡಿಸಿದರು. ಮಾನಸ ಪುನರ್ವಸತಿ ಕೇಂದ್ರದ ವರದಿಯನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ಹೆನ್ರಿ ಮಿನೇಜಸ್ ಮಂಡಿಸಿದರು. 2017-18ನೇ ವರ್ಷದ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು.
ಆಮ್ಚೊ ಸಂದೇಶ್ ಪತ್ರಕ್ಕೆ ಅತ್ಯಾಧಿಕ ಚಂದಾದಾರರನ್ನು ಸಂಗ್ರಹಿಸಿದ ವಲೆನ್ಸಿಯಾ, ಜೆಪ್ಪು, ಮಿಲಾಗ್ರಿಸ್ ಮಂಗಳೂರು ಘಟಕಗಳನ್ನು ಸನ್ಮಾನಿಸಲಾಯಿತು, ಹಾಗೂ ಎಪಿಸ್ಕೊಪಲ್ ಸಿಟಿ ವಾರಾಡೊ, ಕಿನ್ನಿಗೋಳಿ ವಾರಾಡೊ ಮತ್ತು ಪೆಜಾರ್ ವಾರಾಡೊಗಳನ್ನು ಅಭಿನಂಧಿಸಲಾಯಿತು. ಅತ್ಯಧಿಕ ಜಾಹಿರಾತುಗಳನ್ನು ಸಂಗ್ರಹಿಸಿದ ಬಂಟ್ವಾಳ ವಾರಾಡೊ ಮತ್ತು ಮೂಡಬಿದ್ರಿ ವಾರಾಡೊಗಳನ್ನು ಅಭಿನಂದಿಸಲಾಯಿತು. ಗುರುದೀಕ್ಷೆ ಪಡೆದ 30 ಸಂವತ್ಸರಗಳನ್ನು ಕಳೆದ ಕಥೊಲಿಕ್ ಸಭೆಯ ಆತ್ಮಿಕ ನಿರ್ದೇಶಕ ವಂದನೀಯ ಮಾಥ್ಯೂ ವಾಸ್‍ರವರನ್ನು ಅಧ್ಯಕ್ಷ ಶ್ರೀ ಅನಿಲ್ ಲೋಬೊರವರು ಅಭಿನಂದಿಸಿದರು. ಎಪಿಎಂಸಿ ಚುನಾವಣೆಯಲ್ಲಿ ವಿಜೇತರಾಗಿರುವ ಶ್ರೀಮತಿ ಸೆಲೆಸ್ತಿನ್ ಡಿಸೋಜಾರವರನ್ನು ಅಭಿನಂದಿಸಲಾಯಿತು.
(Scroll down to view photo...)
ಪದಾಧಿಕಾರಿಗಳ ಚುನಾವಣೆ
2017-18ನೇ ವರ್ಷಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೂತನ ಅಧ್ಯಕ್ಷರಾಗಿ ಶ್ರೀ ಅನಿಲ್ ಲೋಬೊ, ವಲೆನ್ಸಿಯಾ ಇವರು ಸರ್ವಾನುಮತದಿಂದ ಚುನಾಯಿತರಾದರು, ಇತರ ಪದಾಧಿಕಾರಿಗಳು -
ನಿಯೋಜಿತ ಅಧ್ಯಕ್ಷ - ಶ್ರೀ ಆಲ್ವಿನ್ ಮೊನಿಸ್, ಫರ್ಲಾ
ಉಪಾಧ್ಯಕ್ಷ - ಶ್ರೀ ವಾಲ್ಟರ್ ಮೊನಿಸ್, ಬೆಳ್ತಂಗಡಿ
ಪ್ರಧಾನ ಕಾರ್ಯದರ್ಶಿ - ಶ್ರೀ ಗೊಡ್ವಿನ್ ಪಿಂಟೊ, ಬಿಜೈ
ಸಹಕಾರ್ಯದರ್ಶಿ - ಶ್ರೀಮತಿ ಸೆಲೆಸ್ತಿನ್ ಡಿಸೋಜಾ, ಮಡಂತ್ಯಾರ್
ಖಜಾಂಚಿ - ಶ್ರೀ ಅಲ್ಫೋನ್ಸ್ ಡಿಸೋಜಾ, ಕಯ್ಯಾರ್
ಸಹಖಜಾಂಚಿ - ಕುಮಾರಿ ವಿವಿಡ್ ಡಿಸೋಜಾ, ಕಾಟಿಪಳ್ಳ
ಕಥೊಲಿಕ್ ಸಭೆಯು ಯೇಸು ಪ್ರಭುವಿನ ಸತ್ವ ಮತ್ತು ಭೋದನೆಗಳಿಗೆ ಮಹತ್ವ ಕೊಟ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದನ್ನು ಮುಂದುವರಿಸಬೇಕು ಎಂಬ ಸಂದೇಶ ನೀಡಿ ವಂದನೀಯಾ ಮಾಥ್ಯೂ ವಾಸ್ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಶ್ರೀ ಡೇವಿಡ್ ಡಿಸೋಜಾ, ಶ್ರೀ ಜೇಮ್ಸ್ ಲೋಬೊ, ಶ್ರೀ ಸಿರಿಲ್ ಫೆರಾವೊ, ಶ್ರೀ ಕಾಸ್ಮಿರ್ ಮಿನೇಜಸ್, ಶ್ರೀ ಎಲ್.ಜೆ.ಫೆರ್ನಾಂಡಿಸ್, ಶ್ರೀ ಜೆರಾಲ್ಡ್ ಡಿಕೋಸ್ತಾ, ಶ್ರೀ ಆಂಡ್ರು ನೊರೊನ್ಹಾ, ಶ್ರೀ ನೈಜಿಲ್ ಪಿರೇರಾ, ಶ್ರೀ ಲ್ಯಾನ್ಸಿ ಡಿಕುನ್ಹಾ, ಶ್ರೀಮತಿ ಫ್ಲೇವಿ ಡಿಸೋಜಾ ಉಪಸ್ಥಿತರಿದ್ದರು.