ಕಿನ್ನಿಗೋಳಿ, ಸೆಪ್ಟೆಂಬರ್ 4 ರಂದು ಸಂವಿಧಾನದ ಪರಿಚ್ಛೇದಗಳ ಪರಿಚಯ ಮತ್ತು ಅಲ್ಪಸಂಖ್ಯಾತರ ಹಕ್ಕಿನ ಬಗ್ಗೆ ಮಾಹಿತಿ ಶಿಬಿರವನ್ನು ಇಮ್ಮಾಕ್ಯೂಲೆಟ್ ಕನ್ಸೆಪ್ಸನ್ ಚರ್ಚ್ ಕಿನ್ನಿಗೋಳಿ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.
ಸಂವಿಧಾನದಲ್ಲಿ ಸರ್ವ ಜನರ ಸಹಬಾಳ್ವೆಗಾಗಿ ಬೇಕಾದ ಎಲ್ಲಾ ಹಕ್ಕುಗಳನ್ನು ನೀಡಲಾಗಿದೆ. ಆ ಹಕ್ಕುಗಳನ್ನು ಪ್ರಜೆಗಳಿಗೆ ಲಭಿಸುವಂತೆ ಮಾಡುವುದು ಸರಕಾರದ ಆದ್ಯ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿಗಳಾದ ವಂ| ಫಾದರ್ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾರವರು ತಿಳಿಸಿದರು. ಈ ಕಾರ್ಯಕ್ರಮವನ್ನು ಬೆಳಿಗ್ಗೆ 8:30 ಗಂಟೆಗೆ ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 200 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಥೊಲಿಕ್ ಸಭಾ ಕಿನ್ನಿಗೋಳಿ ಘಟಕ ಹಾಗೂ ಶ್ರಿ ಸಾಮಾನ್ಯರ ಆಯೋಗ ಈ ಕಾರ್ಯಕ್ರಮವನ್ನು ಆಯೋಚಿಸಿತ್ತು.
ಈ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂ| ಫಾದರ್ ಫಾವೊಸ್ತಿನ್ ಲೋಬೊ, ಸಹಾಯಕ ಧರ್ಮ ಗುರುಗಳಾದ ವಂ| ಫಾದರ್ ವಿವೇಕ್ ಪಿಂಟೊ ಮತ್ತು ವಂ| ಫಾದರ್ ಲ್ಯಾನ್ಸಿ ಸಲ್ಡಾನಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಕಾರ್ಯದರ್ಶಿ ವಿನ್ಸೆಂಟ್ ಮಥಾಯಸ್, 21 ಆಯೋಗಾದ ಸಂಯೋಜಕ ಜೋಸೆಫ್ ಕ್ವಾಡ್ರಸ್, ಕಥೊಲಿಕ್ ಸಭೆಯ ಅಧ್ಯಕ್ಷ ಪ್ರಕಾಶ್ ಡಿಸೋಜ, ಕಾರ್ಯದರ್ಶಿ ಗ್ರೇಟ್ಟಾ ಫೆರ್ನಾಂಡಿಸ್, ಉಪಧ್ಯಾಕ್ಷ ವಿಲಿಯಂ ಸಿಕ್ವೇರಾ, ಖಜನ್ದಾರ್ ನವೀನ್ ಡಿಸೋಜ ಮತ್ತು ಕಥೊಲಿಕ್ ಸಭೆಯ ಹಾಗೂ ಶ್ರಿ ಸಾಮಾನ್ಯರ ಆಯೋಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಥೊಲಿಕ್ ಸಭೆಯ ಅಧ್ಯಕ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಶ್ರಿ ಸಾಮಾನ್ಯರ ಆಯೋಗದ ಸಂಚಾಲಕಿ ಗ್ರೇಟ್ಟಾ ಫೆರ್ನಾಂಡಿಸ್ ವಂದಿಸಿದರು. ಸಂಗೀತ ಸೆರಾವೊ ಕಾರ್ಯಕ್ರಮವನ್ನು ನಿರೂಪಿಸಿದರು.