ವರದಿ : ವಿಲ್ಸನ್ ಪಿಂಟೊ, ತಾಕೊಡೆ
ಕಥೊಲಿಕ್ ಸಭಾ ತಾಕೊಡೆ ಘಟಕ ಮತ್ತು ಮೌಂಟ್ ರೋಜರಿ ಆಸ್ಪತ್ರೆ ಮೂಡುಬಿದ್ರಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ 20-03-2022 ರಂದು ಹೋಲಿ ಕ್ರೋಸ್ ಚರ್ಚ್ ತಾಕೊಡೆಯ ವಠಾರದಲ್ಲಿ ನೆರವೇರಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ತಾಕೊಡೆ ಘಟಕದ ಅಧ್ಯಕ್ಷರಾದ ಶ್ರೀ ವಿಲ್ಸನ್ ಪಿಂಟೊರವರು ವಹಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಕಥೊಲಿಕ್ ಸಭೆಯ ಆಧ್ಯಾತ್ಮಿಕ ನಿರ್ದೇಶಕರಾದ ತಾಕೊಡೆ ಚರ್ಚ್ ನ ವಂದನೀಯ ಗುರು ನವೀನ್ ಪ್ರಕಾಶ್ ಡಿ’ಸೋಜರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಮೌಂಟ್ ರೋಜರಿ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಪ್ರಿನ್ಸಿ ಶಿಬಿರದಲ್ಲಿ ದೊರಕುವ ಸೌಲಭ್ಯಗಳು ಮತ್ತು ಉಚಿತ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಸಬಿತಾ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ಐವಿ ಕ್ರಾಸ್ತಾ, ಸಮಿತಿ ಸಂಯೋಜಕರಾದ ಶ್ರೀ ಮೈಕಲ್ ಕ್ರಾಸ್ತಾ ಉಪಸ್ಥಿತರಿದ್ದರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರುಗಳಾದ ಡಾ| ಮಹೇಶ್ ಹಂಪನ್ನನವರ್ MBBS, MD, ಸಾಮಾನ್ಯ ರೋಗ ತಜ್ಞರು, ಡಾ| ಶುಶಾಂತ್ ಶೆಟ್ಟಿ MBBS, MS (ENT), ಕಿವಿ, ಮೂಗು, ಗಂಟಲು ತಜ್ಞರು, ಡಾ| ಸೌಪರ್ಣ ಅಧಿಕಾರಿ BDS, ದಂತ ವೈದ್ಯರು, ಡಾ| ಶ್ರೀಲತಾ ಪೈ BMS, ಪ್ರಸವ ಮತ್ತು ಸ್ತ್ರೀ ರೋಗ ತಜ್ಞರು, ಲಭ್ಯವಿದ್ದರು.
ಸುಮಾರು 151 ಕ್ಕಿಂತ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು. ಫಾದರ್ ಮುಲ್ಲರ್ಸ್ ಆಸ್ಪತ್ರೆವತಿಯಿಂದ ಶಿಭಿರಾರ್ಥಿಗಳಿಗೆ ಕಣ್ಣಿನ ಪರೀಕ್ಷೆ ನಡೆಸಲಾಯಿತು. ಕಡಿಮೆ ದರದಲ್ಲಿ ಕನ್ನಡಕ ವಿತರಣೆ ಮಾಡಲಾಗಿದ್ದು ಸುಮಾರು 61 ಜನರು ಇದರ ಪ್ರಯೋಜನ ಪಡೆದರು. ಈ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು.
ಕಥೊಲಿಕ್ ಸಭಾ ತಾಕೊಡೆ ಘಟಕದ ಉಪಾಧ್ಯಕ್ಷರಾದ ಶ್ರೀ ಲೋಯ್ಡ್ ರೇಗೊ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಚಾರ್ಲ್ಸ್ ಕ್ರಾಸ್ತಾರವರು ವಂದನಾರ್ಪಣೆಗೈದರು.