Dec 16, 2020 : ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ದ ವತಿಯಿಂದ ಕಳೆದ 65 ವರ್ಷಗಳಿಂದ ಯಾವುದೇ ಅಪಘಾತ ಹಾಗೂ ಕೇಸ್‍ಗಳಿಲ್ಲದ ಹಿರಿಯ ಆಟೋ ಚಾಲಕ 85 ಪ್ರಾಯದ ಮೊಂತು ಲೋಬೊರವರಿಗೆ ಮನೆ ದುರಸ್ತಿ ಹಾಗೂ ಆರೋಗ್ಯ ಕ್ಷೇಮಕಾಗಿ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ವಂದನೀಯ ಮ್ಯಾಥ್ಯು ವಾಸ್, ಕಥೊಲಿಕ್ ಸಭೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತಾ, ಅಧ್ಯಕ್ಷರಾದ ಶ್ರೀ ಸ್ಟೇನೀ ಲೋಬೊ ರವರು 30,200/- ರೂಪಾಯಿಯ ಚೆಕ್ಕನ್ನು ಮೊಂತು ಲೋಬೊ ರವರಿಗೆ ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ಕಥೊಲಿಕ್ ಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಅವರ ಮನೆಯ ದುರಸ್ಥಿಯ ಸಂಪೂರ್ಣ ಖರ್ಚನ್ನು ಕೊಡುವುದಾಗಿ ಭರವಸೆ ನೀಡಿದರು.
ಸಮಿತಿಯ ಪದಾಧಿಕಾರಿಗಳಾದ ನಿಯೋಜಿತ ಅಧ್ಯಕ್ಷ: ಶ್ರೀ ರಾಜು ಸ್ಟೀಫನ್ ಡಿಸೋಜ, ಉಪಾದ್ಯಕ್ಷ: ಶ್ರೀ ಸ್ಟೀವನ್ ರೊಡ್ರಿಗಸ್, ಪ್ರಧಾನ ಕಾರ್ಯದರ್ಶಿ: ಶ್ರೀ ಅಲ್ಫೋನ್ಸ್ ಫೆರ್ನಾಂಡಿಸ್, ಕೋಶಾಧಿಕಾರಿ: ಕುಮಾರಿ ಮೆಲ್ರಿಡಾ ರೊಡ್ರಿಗಸ್ ಸಹ ಕಾರ್ಯದರ್ಶಿ: ಶ್ರೀ ದೀಪಕ್ ಡಿಸೋಜ,ಆಮ್ಚೊ ಸಂದೇಶ್ ಸಂಪಾದಕರಾದ ಶ್ರೀ ವಿಲ್‍ಫ್ರೆಡ್ ಲೋಬೊ ಉಪಸ್ಥಿತರಿದ್ದರು.
ಕಥೊಲಿಕ್ ಸಭೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತಾರವರು ಅವರ ಮನೆಗೆ ಬೇಟಿ ಮಾಡಿ ಮನೆ ಮತ್ತು ಕುಟುಂಬದ ಸಮಸ್ಯೆಯ ಬಗ್ಗೆ ಪರಿಶೀಲಿಸಿದರು.